೧. ಹಿತವಚನವು ಮನಸ್ಸಿನ ಕೊಳೆಯನ್ನು ಹೇಗೆ ತೊಳೆಯುತ್ತದೆ?
ಮುಸ್ಸಂಜೆಯ ಚಂದ್ರ ಕತ್ತಲನ್ನು ಕಳೆವಂತೆ, ಬಗೆಯ (ಮನಸ್ಸಿನ) ಕೊಳೆಯನ್ನೆಲ್ಲ ಹಿತವಚನ ತೊಳೆದುಬಿಡುತ್ತದೆ
೨. ಯಾರ ಕಿವಿಗೆ ಉಪದೇಶ ನಾಟುವುದಿಲ್ಲ?
ರಾಜರ ಮನೆತನದಲ್ಲಿ ಹುಟ್ಟಿದರೆ ಸಾಕು. ಅಹಂಕಾರದಿಂದ ಅವರ ಕಿವಿ ಕಿವುಡಾಗಿ ಬಿಡುತ್ತದೆ. ಇಂತಹವರ ಕಿವಿಗೆ ಉಪದೇಶವು ನಾಟುವುದಿಲ್ಲ
೩ ಯಾರಿಗೆ ಜಗತ್ತು ಕುದ್ರವಾಗಿ ಕಾಣುತ್ತದೆ?
ದುಡ್ಡು ದುರಭಿನದ ತವರು ದುಡ್ಡಿನ ಪೈತ್ಯ (ಮನೋವಿಕಾರ) ಅಡರಿದವರಿಗೆ ಜಗತ್ತೇಲ್ಲ ಕ್ಷುದ್ರವಾಗಿ ಕಾಣುತ್ತದೆ
೪ ಲಕ್ಷೀ ಯಾವ ಯಾವ ದುರ್ಗುಣಗಳನ್ನು ಹೊತ್ತು ಬಂದಿದ್ದಾಳೆ?
ಲಕ್ಷೀಯೆಂಬ ಚಂಚಲೆ ಹಾಲುಗಡಲಿನಿಂದ ಮೇಲೆದ್ದು ಬರುವಾಗಲೇ ತನ್ನ ಜತೆಗಾರರಿಂದ ಹಲವೆಲ್ಲ ದುರ್ಗುಣಗಳನ್ನು ಹೊತ್ತುಕೊಂಡು ಬಂದಿದ್ದಾಳೆ
೫ ಸಂಪತ್ತಿನ ಗುಣವೇನು?
ಸಂಪತ್ತಿನ ಸ್ನೇಹದ ಬಂಧನವಿಲ್ಲ : ಕುಲದ ಗುರುತಿಲ್ಲ: ರೂಪದ ಒಲವಿಲ್ಲ.ಒಂದೇ ಮನೆತನದಲ್ಲಿ ಬಹುಕಾಲ ಉಳಿಯವ ಅಭ್ಯಾಸವಂತು ಇಲ್ಲವೇ ಇಲ್ಲ
೬ ಯಾರಾರನ್ನು ಕಂಡರೆ ಸಂಪತ್ತಿನ ಆಗಿಬರುವುದಿಲ್ಲ?
ವಿದ್ಯಾವಂತ, ಗುಣವಂತ, ವೀರ,ಶೂರ, ಸಜ್ಜನರು, ಕುಲೀನರು, ದಾನಶೀಲರು, ವಿನಯಶೀಲರು, ಹಾಗೂ ಪಂಡಿತರನ್ನು ಕಂಡರೆ ಸಂಪತ್ತಿನ ಆಗಿಬರುವುದಿಲ್ಲ
೭ ದರ್ಭೆಯ ಚಿಗುಸರು ಯಾವ ಗುಣವನ್ನು ಒರೆಸಿಬಿಡುತ್ತದೆ?
ದರ್ಭೆಯ (ಒಂದು ಜಾತಿಯ ಹುಲ್ಲು) ಚಿಗುರು ಕ್ಷಮಾಗುಣವನ್ನು ಒರೆಸಿಬಿಡುತ್ತದೆ
೮ ಬೆಳ್ಕೊಡೆಯ ಅಡಿಯಲ್ಲಿ ಯಾವುದು ಕಾಣುವುದಿಲ್ಲ?
ಬೆಳ್ಕೊಡೆಯ ಅಡಿಯಲ್ಲಿ ಪೆರಲೋಕ ಕಾಣಿಸುವುದಿಲ್ಲ