— ಕುವೆಂಪು.

ಆ)ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

೧. ಆಶ್ವಯುಜದ ಬತ್ತದ ಗದ್ದೆಯ ಬಣ್ಣಯಾವ ಹಸುರಿನಂತಿದೆ?

 : ಆಶ್ವಯುಜದ ಬತ್ತದ ಗದ್ದೆಯ ಬಣ್ಣ ಗಿಳಿಯ ಹಸುರಿನಂತಿದೆ .

೨. ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ ?

ಉ : ಕವಿಯು ನೋಡಿದ ಅಡಕೆಯ ತೋಟ ವನದಂಚಿನಲ್ಲಿದೆ .

೩. ‘ ಹಸುರು ‘ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ ?

 : ‘ ಹಸುರು ‘ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ .

೪. ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ ?

ಉ : ಕವಿಗೆ ಹುಲ್ಲಿನ ಹಾಸು ಮಕಮಲ್ಲಿನ ಹೊಸಪಚ್ಚೆಯ ಜಮಖಾನೆಯ ರೀತಿ ಕಂಡಿದೆ .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

೧ ) ಕವಿಗೆ ಯಾವ್ಯಾವುದರಲ್ಲಿ ಆಗಸದಿಂದ ಬಿಸಿಲವರೆಗೂ ಹಸುರು ಕಾಣುತ್ತಿದೆ ?

ಉ : ಕವಿಗೆ ನವರಾತ್ರಿಯಲ್ಲಿ , ಹಸುರಿನಿಂದ ಕಂಗೊಳಿಸುವ ಭೂಮಿಯಲ್ಲಿ , ನೀಲ ಸಮುದ್ರದಲ್ಲಿ

ಹಸುರಾದ ಕವಿಯ ಹೃದಯಕ್ಕೆ ಆಗಸ ಮುಗಿಲು , ಗದ್ದೆಯ ಬಯಲು , ಮಲೆ , ಕಣಿವೆ , ಸಂಜೆಯ ಬಿಸಿಲು

ಕಾಡಂಚಿನ ಅಡಕೆಯ ತೋಟ , ಹೂವಿನ ಕಂಪಿನಲ್ಲಿ , ಎಲರಿನ ತಂಪಿನಲ್ಲಿ ಹಕ್ಕಿಯ ಕೊರಲಿನಲ್ಲಿ ,

ಹೀಗೆ ಆಗಸದಿಂದ ಬಿಸಿಲವರೆಗೂ ಕವಿಗೆ ಹಸುರು ಕಾಣುತ್ತಿದೆ .

೨ ) ಹಸುರು ಸಕಲೇಂದ್ರಿಯಗಳನ್ನು ವ್ಯಾಪಿಸಿದೆ ಎಂಬುದನ್ನು ಕವಿಯು ಹೇಗೆ ವರ್ಣಿಸಿದ್ದಾರೆ ?

ಉ : ಹಸುರಾದ ಭೂಮಿ , ಆಗಸ , ಮುಗಿಲು , ಗದ್ದೆಯ ಬಯಲು , ಮಲೆ , ಕಣಿವೆ , ಸಂಜೆಯ ಬಿಸಿಲು ಕಾಡಂಚಿನ

ಅಡಕೆಯ ತೋಟ ಇವೆಲ್ಲಾ ಕಣ್ಣಿಗೆ ಗೋಚರವಾದರೆ , ಹೂವಿನ ಕಂಪಿನ ಹಸುರು ಮೂಗಿಗೆ , ಎಲರಿನ ತಂಪಿನ ಸ್ಪರ್ಷ