ಅಭ್ಯಾಸ ಪ್ರಶ್ನೋತ್ತರಗಳು
1.ರಾಹಿಲನು ಯಾರು ?
ರಾಹಿಲನು ಒಬ್ಬ ವೈದ್ಯ ಸೈನಿಕ.
2.ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು ?
ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಬೇಕಾದ ಔಷಧ ಮತ್ತು ಶಾಸ್ತ್ರಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನುಭದ್ರವಾಗಿ ಹಿಡಿದುಕೊಂಡಿದ್ದನು.
3.ಗಡಿ ಪ್ರದೇಶದಲ್ಲಿ ‘ಬ್ಲಾಕ್ ಔಟ್’ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ ?
ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ಬ್ಲಾಕ್ ಔಟ್’ ನಿಯಮವನ್ನುಪಾಲಿಸಲಾಗುತ್ತದೆ.
4.ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು ?
ರಾಹಿಲನು ಮುದುಕಿಯ ಎದುರಿಗೆ “ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ , ಸಂಕಷ್ಟಕ್ಕಿಡಾದ ಮನುಷ್ಯರ ಕಡೆಯವನು”ಎಂದುಗAಭೀರವಾದ ಮಾತನ್ನು ನುಡಿದನು.
5.ಯುದ್ಧದ ಬಗೆಗೆ ಮುದುಕಿಯು ಏನೆಂದು ಗೊಣಗಿಕೊಂಡು ಬಾಗಿಲು ತೆರೆದಳು ?
“ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯಮಾಡುವುದೇ ಯುದ್ಧದ ಪರಿ” ಎಂದು ಗೊಣಗಿಕೊಂಡು ಬಾಗಿಲು ತೆರೆದಳು.
ಹೆಚ್ಚುವರಿ ಪ್ರಶ್ನೋತ್ತರಗಳು
6.ಬ್ಲಾಕ್ ಔಟ್ ನಿಯಮ ಎಂದರೇನು ?
ಯುದ್ಧದ ಕಾಲದಲ್ಲಿ ರಾತ್ರಿವೇಳೆ ಶತ್ರು ಸೈನಿಕರು ವೈಮಾನಿಕ ದಾಳಿಮಾಡಲು ಅವಕಾಶವಾಗದಂತೆ ವಿದ್ಯುತ್ ದೀಪ,ಬೆಂಕಿಯನ್ನು ಉರಿಸದೆ ಕತ್ತಲಿನಲ್ಲಿದ್ದು
ರಕ್ಷಿಸಿಕೊಳ್ಳುವುದನ್ನು ‘ಬ್ಲಾಕ್ ಔಟ್ ನಿಯಮ ’ ಎಂದು ಕರೆಯಲಾಗುತ್ತದೆ.
7.ಮುದುಕೀಯ ಕಣ್ಣುಗಳು ಕ್ಷಣಕಾಲ ರೋಷದಿಂದ ಏಕೆ ಕೆರಳಿದವು?