— ಪಂಪ.

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

೧. ದ್ರೋಣನು ಪರಶುರಾಮರಲ್ಲಿಗೆ ಏಕೆ ಬಂದನು ?

ಉ : ದ್ರೋಣನು ಪರಶುರಾಮರಲ್ಲಿಗೆ ದ್ರವ್ಯವನ್ನು ( ಹಣವನ್ನು) ಬೇಡುವುದಕ್ಕಾಗಿ ಬಂದನು .

೨. ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು ?

ಉ : ದ್ರೋಣನು ಅಶ್ವತ್ಥಾಮನೊಡನೆ ಪರಶುರಾಮನ ಬಳಿಗೆ ಬಂದನು .

೩. ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು ?

ಉ : ಪರಶುರಾಮನು ದೋಣನಿಗೆ ವಾರುಣ , ವಾಯುವ್ಯ , ಆಗ್ನೆಯ , ಐಂದಾದಿ ಪ್ರಧಾನ ಅಸ್ತ್ರಗಳನ್ನು ಕೊಟ್ಟನು .

೪ ದ್ರುಪದನು ಪಡಿಯನಿಗೆ ಏನೆಂದು ಹೇಳಿ ಕಳುಹಿಸಿದನು ?

ಉ : ಅಂತಹವನನ್ನು ನಾನು ತಿಳಿದಿಲ್ಲ : ಅವನನ್ನು ಹೊರಕ್ಕೆ ತಳ್ಳು ಎಂದು ದುಪದನು ಪಡಿಯಾನಿಗೆ ( ದ್ವಾರಪಾಲಕನಿಗೆ ) ಹೇಳಿದನು .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ :

೧. ಪರಶುರಾಮನು ಮಣ್ಣಿನ ಪಾತ್ರೆಯಲ್ಲಿ ಅರ್ಥ್ಯವನ್ನು ಕೊಡಲು ಕಾರಣವೇನು ?

ಉ : ಪರಶುರಾಮನು ತನ್ನಲ್ಲಿದ್ದದ್ದನ್ನೆಲ್ಲಾ ಬೇಡಿದವರಿಗೆ ದಾನಮಾಡಿದ್ದರಿಂದ ಆತನ ಬಳಿ ಬಿಲ್ಲು ಬಾಣಗಳಲ್ಲದೆ ಬೇರೇನೂ ಇರಲಿಲ್ಲ . ಆ ಸಂದರ್ಭದಲ್ಲಿ ದ್ರೋಣನು ಅಶ್ವತ್ಥಾಮನ ಜೊತೆಯಲ್ಲಿ ಏನಾದರು ದ್ರವ್ಯ ಬೇಡಲೆಂದು  ಪರಶುರಾಮನ ಬಳಿಗೆ ದನು . ಆಗ ಪರಶುರಾಮನು ತನ್ನ ಬಳಿ ಚಿನ್ನದ ಪಾತೆಗಳಿಲ್ಲದುದರಿಂದ ದ್ರೋಣರಿಗೆ ಮಣ್ಣಿನ ಪಾತ್ರೆಯಲ್ಲಿಯೇ ಅರ್ಭ್ಯವನ್ನು ಕೊಟ್ಟು ಪೂಜಿಸಿದನು .

೨. ದ್ರುಪದನು ದ್ರೋಣರಿಗೆ ಹೇಳಿದ ಮಾತುಗಳು ಯಾವುವು ?

ಉ : ದ್ರುಪದನು ದೋಣರಿಗೆ “ ನೀನು ಯಾರೆಂದು ನನಗೆ ತಿಳಿದಿಲ್ಲ . ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ ? ಎಂಬ ಮಾತುಗಳಿಂದ ದ್ರೋಣನಿಗೆ ಮರ್ಮಭೇದಕ ವಾಗುವಂತೆ ಹೀಯ್ಯಾಳಿಸಿದನು .

೩. ದ್ರುಪದನ ಮಾತಿಗೆ ದ್ರೋಣನ ಪ್ರತ್ಯುತ್ತರವೇನು ?

ಉ : ದುಪದನ ಮಾತಿಗೆ ದ್ರೋಣನು ಎಲೋ ಏಳನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು ‘ ಎನ್ನುವ ಗಾದೆಯಂತೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲದೆ ಬಿಡುತ್ತಿದ್ದೇನೆ . ಈ ಸಭಾವಲಯದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನೀನು ಬೆಚ್ಚುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ ? ” ಎಂದು ಪ್ರತ್ಯುತ್ತರ ಕೊಟ್ಟನು .

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯದಲ್ಲಿ ಉತ್ತರಿಸಿ

೧. ದ್ರುಪದನಿಗೂ ದ್ರೋಣನಿಗೂ ನಡೆದ ಸಂಭಾಷಣೆಯನ್ನು ಸಂಕ್ಷಿಪ್ತವಾಗಿ ಬರೆಯಿರಿ .