೧. ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು ?
ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿತು.
೨. ಹಲಗಲಿಯ ನಾಲ್ವರು ಪ್ರಮುಖರು ಯಾರು ?
ಹಲಗಲಿಯ ನಾಲ್ವರು ಪ್ರಮುಖರುಪೂಜೇರಿ ಹನುಮಾ , ಬ್ಯಾಡರ ಬಾಲ , ಜಡಗ , ರಾಮ.
೩. ಹಲಗಲಿ ಗುರುತು ಉಳಿಯದಂತಾದುದು ಏಕೆ ?
ಕುಂಪಣಿ ಸರ್ಕಾರದ ದಂಡು ಹಲಗಲಿಗೆ ಬೆಂಕಿ ಹಚ್ಚಿ ಸುಟ್ಟು ಬೂದಿ ಮಾಡಿದ್ದರಿಂದ ಗುರುತು ಉಳಿಯದಂತಾಯಿತು.
೪. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ ?
ಹಲಗಲಿಯ ಬಂಟರ ಹತಾರ ಕದನದ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.
೫. ಹಲಗಲಿ ಗ್ರಾಮ ಎಲ್ಲಿದೆ ?
ಹಲಗಲಿ ಗ್ರಾಮ ಮುಧೋಳ ಸಂಸ್ಥಾನದಲ್ಲಿದ್ದು, ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ.
೬. ಒಳಗಿನ ಮಂದಿ ಗುಂಡನ್ನು ಹೇಗೆ ಹೊಡೆದರು ?
ಒಳಗಿನ ಮಂದಿ ಮುಂಗಾರು ಸಿಡಿಲು ಸಿಡಿಯುವ ಹಾಗೆ ಗುಂಡನ್ನು ಹೊಡೆದರು.
೭. ಅಗಸಿಗೆ ಬಂದು ಹಲಗಲಿ ಬೇಡರಿಗೆ ಬುದ್ಧಿ ಮಾತು ಹೇಳಿದವರು ಯಾರು ?
ಅಗಸಿಗೆ ಬಂದು ಹಲಗಲಿ ಬೇಡರಿಗೆ ಬುದ್ಧಿ ಮಾತು ಹೇಳಿದವರು ಹೆಬಲಕ ಸಾಬ.
೮. ಲಾವಣಿಕಾರ ಯಾರ ದಯದಿಂದ ಲಾವಣಿ ಹಾಡಿದೆನೆಂದು ಹೇಳಿದ್ದಾನೆ ?