೧. ‘ ಜೈಮಿನಿ ಭಾರತ ‘ ಕಾವ್ಯವನ್ನು ಬರೆದ ಕವಿ ಯಾರು ?
ಜೈಮಿನಿ ಭಾರತ ಕಾವ್ಯವನ್ನು ಬರೆದ ಕವಿ ಲಕ್ಷ್ಮೀಶ
೨. ಯಜ್ಞಾಶ್ವವನ್ನು ಕಟ್ಟಿದವರು ಯಾರು ?
ಯಜ್ಞಾಶ್ವವನ್ನು ಕಟ್ಟಿದವರು ಲವ
೩ ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು ?
ಕುದುರೆಯನ್ನು ಲವನು ತನ್ನ ಉತ್ತರೀಯದಿಂದ ಕಟ್ಟಿದನು .
೪. ಮುನಿಸುತರು ಹೆದರಲು ಕಾರಣವೇನು ?
ಲವನು ಯಜ್ಞಾಶ್ವವನ್ನು ಕಟ್ಟಿ ಹಾಕಿದ್ದರಿಂದ ಮುನಿಸುತರು ಹೆದರಿದರು .
೧. ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ವಿವರಿಸಿ .
ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡು , ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು . ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಭುಜಬಲ ಪರಾಕ್ರಮಿಗಳಾದ ರಾಜರುಗಳು ತಡೆಯಲು ಹೆದು ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು . ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು .
೨. ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು ?
ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಭೂಮಂಡಲದಲ್ಲಿ ಕೌಸಲ್ಯಯು ಮಗನಾದ ರಾಮನು ಒಬ್ಬನೇ ವೀರನು ಇದು ಅವನ ಯಜ್ಞಕುದುರೆ ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರು ತಡೆಯಲಿ ” ಎಂದ ಬರೆಯಲಾಗಿತ್ತು .
೩. ಕುದುರೆಯನ್ನುಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ.
ಲವನು ಆಶ್ರಮವನ್ನು ಹೊಕ್ಕ ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಬಾಳೆಯ ಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು ಹೆದರಿದ ಮುನಿಸುತರು ” ಬೇಡಬೇಡ ಅರಸುಗಳ ಕುದುರೆಯನ್ನು ಬಿಡು , ನಮ್ಮನ್ನು ಹೊಡೆಯವರು ” ಎಂದು ಹೇಳಿದರು . ಆಗ ಅವನು ನಗುತ “ ಬ್ರಾಹ್ಮಣರ ಮಕ್ಕಳು ಹೆದರಿದರೆ , ಜಾನಕಿಯ ಮಗನು ಇದಕ್ಕೆ ಹೆದರುವನೇ , ನೀವು ಹೋಗಿ ” ಎಂದು ಶೌರ್ಯದಿಂದ ಹೇಳಿದನು .